Thursday 3 May 2018

ಕೃಷಿ ಭಾಗ್ಯ = ಲೂಟಿ ಭಾಗ್ಯ ! Where Krishi Bhagya ?


                  ಕೃಷಿ ಭಾಗ್ಯ = ಲೂಟಿ ಭಾಗ್ಯ !


                 ಕೂಡಂಡ ರವಿ, ಹೊದ್ದೂರು, ಕೊಡಗು




ಕೃಷಿ ಭಾಗ್ಯ 2017-18 ಅನ್ನು ಸರಕಾರ ಜಾರಿಗೆ ತಂದಿದೆ. ಈ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ ಮಾಡುವುದು ಯೋಜನೆಯ ಗುರಿ. ಸರಕಾರದ ವಿವಿಧ ಅಳತೆಯ ಹಾಗೂ ಘಟಕದ ವೆಚ್ಚ ಈ ಕೆಳಗಿನಂತಿದೆ.




ಕೃಷಿ ಹೊಂಡದ ಗಾತ್ರ             ವೆಚ್ಚ      

10*10* 3                    22087.18 
12*12*3                    27080 00
15*15*3                     39589-00
18*18*3                   52032-00
21*21*3                    72502-00






 ಈ ಮೇಲಿನ ಅಳತೆ ಮತ್ತು ದರವನ್ನು ನಿಗದಿ ಪಡಿಸಲಾಗಿದೆ. ಆದರೆ, ಈ ಮೇಲಿನ ಅಳತೆಯಲ್ಲಿ ಕೇವಲ 21*21*3 ಎಂದರೆ, 70* 70* 10 ಘನ ಅಡಿ ಗಾತ್ರದ ಕೆರೆಯ ಬಗ್ಗೆ  ಮಾತ್ರ ಮಾಹಿತಿ ನೀಡಿ,  ಕೃಷಿ ಅಧಿಕಾರಿಗಳು ಅರ್ಜಿ ಪಡೆದಿರುತ್ತಾರೆ. ಅಲ್ಲದೆ, ರೈತರಿಂದ ತಲಾ 10, 300 ರೂಪಾಯಿಯನ್ನು ಹಿಟಾಚಿ  ಮಾಲೀಕರಿಗೆ ಕೊಡಿಸಿರುತ್ತಾರೆ. 21 ಘಂಟೆಯ ಅವಧಿಯಲ್ಲಿ ಕೆರೆಯನ್ನು ತೆಗೆಯಲಾಗುತ್ತದೆ. ಇದು  49 ಸಾವಿರ ಘನ ಅಡಿಯಾಗಬೇಕು. ಆದರೆ, ಇಲಾಖಾಧಿಕಾರಿಗಳು 42 ಸಾವಿರ ಘನ ಅಡಿಯ ಕೆರೆ ನಿರ್ಮಿಸುತ್ತಿದ್ದಾರೆ. 10 ಅಡಿ ಆಳ ಇರಬೇಕಾದ ಕೆರೆ 7. 5 ಅಡಿ ಮಾತ್ರ ಇರುತ್ತದೆ. ಸರಕಾರ ಮೇಲೆ ಸೂಚಿಸಿದಂತೆ ಸಣ್ಣ ಪ್ರಮಾಣದ ಕೆರೆ ನಿರ್ಮಾಣಕ್ಕೆ ಸೂಚಿಸಿದ್ದರೂ, ಆ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ವಂಚಿಸುತ್ತಿದ್ಧಾರೆ. ಇವರು ರೈತರಿಗೆ,  ದೊಡ್ಡ ಕೃಷಿ ಹೊಂಡ ನಿರ್ಮಾಣದತ್ತ ಮಾತ್ರ ಒಲವು ತೋರುತ್ತಿದ್ದಾರೆ. ದೊಡ್ಡ ಕೃಷಿ ಹೊಂಡ ತೆಗೆಯಲು ಕೇವಲ 21 ಸಾವಿರ ರೂಪಾಯಿ ಮಾತ್ರ ಖರ್ಚಾಗುತ್ತಿದೆ. ಇದರಲ್ಲಿ ಸರಕಾರದ ಪಾಲು ಕೇವಲ 11 ಸಾವಿರ. ಆದರೆ, ಸರಕಾರ ಈ ಕೃಷಿ ಹೊಂಡಕ್ಕೆ 48 ಸಾವಿರ ಕರೆಯ ಬಾಪ್ತು ಪಡೆಯಲಾಗುತ್ತದೆ. ಇದರಿಂದ ಪ್ರತಿ ಕೆರೆಯಿಂದ 37 ಸಾವಿರ ರೂಪಾಯಿಯನ್ನು ರೈತರ ಹೆಸರಿನಲ್ಲಿ ಪಡೆದು ಅಧಿಕಾರಿಗಳು ಮತ್ತು  ಸರಕಾರ ಮೋಸ ಮಾಡುತ್ತಿರುವರು.  ಸರಕಾರ ಪ್ರತಿ ತಾಲೂಕಿಗೂ 600 ಕೆರೆ ತೆಗೆಸಲು ಗುರಿ ನಿಗಧಿ ಪಡಿಸಲಾಗಿದೆ. ಈಗಾಗಲೇ ಸರಾಸರಿ 50 ರಷ್ಟು ಕರೆಯ ಕಾಮಗಾರಿ ಮುಗಿದಿದೆ. ರೈತರೇ ನೇರವಾಗಿ ಕೃಷಿ ಹೊಂಡ ನಿರ್ಮಾಣ ಮಾಡಿ, ಸರಕಾರದಿಂದ ಹಣ ಹೊಂದಲು ಅವಕಾಶವಿದ್ದರೂ, ಕೂಡಾ ಈ ಬಗ್ಗೆ ಅಧಿಕಾರಿ ವರ್ಗ ಆಸಕ್ತಿ ತೋರಿಸುವುದಿಲ್ಲ. ಸರಕಾರ ಹಾಗೂ ಅಧಿಕಾರಿ ವರ್ಗ ತಮಗೆ ಲಾಭವೆನಿಸುವ ಯೋಜನೆಯ ಪಟ್ಟಿ , ಗುರಿಯನ್ನು  ನಿಗದಿ ಪಡಿಸಲಾಗುತ್ತದೆ. ಆದರೆ, ಸರಕಾರ ಇಂತಿಷ್ಟು ಆಹಾರ ಧಾನ್ಯ ಬೆಳೆಸುವಂತೆ ಅಧಿಕಾರಿ ವರ್ಗಕ್ಕೆ ಗುರಿ ನಿಗದಿ ಮಾಡಿಲ್ಲ.



             ಇದಲ್ಲದೆ, ಡೋಲೋಮೈಟ್ ಖರೀದಿ ಮತ್ತು ವಿತರಣೆಯಲ್ಲಿ ಬಹುದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಖಾಸಗಿ ಮಾರುಕಟ್ಟೆಯಲ್ಲಿ 2600 ರೂಪಾಯಿಗೆ ಖಾಸಗಿ ಮಾರುಕಟ್ಟೆಯಲ್ಲಿ ಧಾರಾಳವಾಗಿ ಸಿಗುತ್ತದೆ. ಅದೇ ಸುಣ್ಣವನ್ನು ಸರಕಾರ ಆಂಧ್ರ ಪ್ರದೇಶದಿಂದ ತರುವ ಡೋಲೋಮೈಟ್‍ಗೆ ಸರಕಾರ 3000 ನೀಡಿ ಖರೀದಿಸುತ್ತದೆ. ಪ್ರತಿ ಟನ್‍ಗೆ ಖಾಸಗಿ 400 ರೂಪಾಯಿ ಹೆಚ್ಚುವರಿ ಪಡೆದು ರೈತರಿಗೆ ಮತ್ತು ಸರಕಾರಕ್ಕೆ ಅಧಿಕಾರಿಗಳು ಮೋಸ ಮಾಡುತ್ತಿದ್ದಾರೆ. ವಿತರಣೆಯಲ್ಲಿ ರೈತನೊಬ್ಬನಿಗೆ ತಲಾ 10 ಚೀಲದಂತೆ ನಿಗಧಿ ಮಾಡಿದ್ದರೂ, ಅದಿಕಾರಿಗಳು   ಒಬ್ಬ ರೈತನಿಗೆ  100ರಿಂದ 600 ಚೀಲ ಡೋಲೋಮೈಟ್ ವಿತರಿಸಿದ್ದಾರೆ. ಇದರಿಂದಾಗಿ ಸಾವಿರಾರು ರೈತರಿಗೆ ತಮಗೆ ಸಿಗಬೇಕಾದ ಸವಲತ್ತುಗಳಿಂದ ವಂಚಿತರಾಗುವಂತೆ ಮಾಡಿದ್ದಾರೆ.



 ಬಿತ್ತನೆ ಬೀಜ
ಸರಕಾರ ಈವರೆಗೂ ಬಿತ್ತನೆ ಬೀಜಗಳಿಗೆ ಸಹಾಯ ಧನವನ್ನು ನೀಡುವುದೇ ಇಲ್ಲ. ಸರಕಾರ ಮತ್ತು ಅಧಿಕಾರಿಗಳಿಗೆ ಲಾಭವಾಗುವ ಎಲ್ಲಾ ವಸ್ತುಗಳನ್ನು ಸರಕಾರವೇ ಖರೀದಿಸಿ,  ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುತ್ತದೆ. ಇದರಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತದೆ. ಮುಂದಾದರೂ, ಸರಕಾರವು ರೈತರಿಗೆ ಸಹಾಯಧನ ನೇರವಾಗಿ ತಲುಪಲು ಅವರಿಗೆ ಬೇಕಾದ ವಸ್ತು- ವಗೈರೆಗಳನು ನೇರವಾಗಿ ಖರೀದಿಸಲು ಅವಕಾಶ ನೀಡುವಂತಾಗಬೇಕು. ರೈತರು ಕೃಷಿಹೊಂಡ ನಿರ್ಮಿಸಿದಲ್ಲಿ ಅದರ ವೆಚ್ಚವನ್ನು ಸಂಪೂರ್ಣ ಸರಕಾರ ನೀಡುವಂತಾಗಬೇಕು.

ಶಾಲಾ ನಿಯಮಗಳು ಶಿಕ್ಷಕರಿಗೆ ವಂದಿಸಬೇಕು. ವಿದ್ಯಾಥರ್ಿಗಳು ಸಮಯಕ್ಕೆ ಸರಿಯಾಗಿ ಶಾಲೆಗೆ ಬರಬೇಕು. ಶಾಲೆಗೆ ಯಾವಾಗಲೂ ಸಮವಸ್ತ್ರ ಧರಿಸಿ ಬರಬೇಕು. ಸಮವಸ್ರ್ತ ಸ್ವಚ್ಛವಾಗಿರಬೇಕು. ಉಗುರು ತೆಗೆದು ಶಾಲೆಗೆ ಬರಬೇಕು. ಶಾಲಾ ಸಮಯದಲ್ಲಿ ಮುಖ್ಯ ಶಿಕ್ಷಕರ ಅನುಮತಿ ಇಲ್ಲದೆ ಹೊರಗಡೆ ಹೋಗಬಾರದು. ಶಾಲೆಗೆ ಹಣ ಮತ್ತು ಮೊಬೈಲ್ ಫೋನ್ ತೆಗೆದುಕೊಂಡು ಹೋಗಬಾರದು. ಶಾಲೆಯಲ್ಲಿ ಅನ್ನವನ್ನು ಹಂಚಬಾರದು. ಬೇಸಿಗೆಯಲ್ಲಿ ಶೂ ಧರಿಸಿಯೇ ಬರಬೇಕು. ಪಾಠದ ವೇಳೆಯಲ್ಲಿ ಗಲಾಟೆ ಮಾಡಬಾರದು.

ಹನಿ ನೀರೂ ಬಂಗಾರ...! Drop of water is Gold .......!

ಹನಿ ನೀರೂ ಬಂಗಾರ...! Pl watch my  these blogs.  Kodagu Darshini : http://koodanda.blogspot.com/ Kodagu Darshini (Kodagina Antaranga):...