Tuesday, 3 December 2019
ಕನ್ನಡದ ಕೊಲೆಗಾರ-ಇಮೋಜಿ...! Emoji the Killer .........!
ಕನ್ನಡದ ಕೊಲೆಗಾರ-ಇಮೋಜಿ...
ಬರಹ: ಕೂಡಂಡ ರವಿ.ಹೊದ್ದೂರು.
<
ಭರತ ಭೂಮಿ ಎಂಬ ಪುಣ್ಯನಾಡಿನಲ್ಲಿ ಕನರ್ಾಟಕವೆಂಬ ಕಾನನದಲ್ಲಿ ಕನ್ನಡವೆಂಬ ರಾಜಮಾತೆಯು ಸುಮಾರು ಎರಡು ಸಾವಿರ ವರ್ಷಗಳಿಂದ ವೈಭವದಿಂದ ರಾಜ್ಯವಾಳುತ್ತಿದ್ದಳು.
ಆಕೆಯ ಆಳ್ವಿಕೆಯ ಕಾಲದಲ್ಲಿ ಪ್ರಜೆಗಳು ಸುಖಿಗಳಾಗಿದ್ದರು. ಅವಳ ವೈಭವವು ಶಿಲಾಶಾಸನಗಳಲ್ಲಿಯೂ ವಿಜೃಂಭಿಸತೊಡಗಿತ್ತು. ಹಲ್ಮಿಡಿ ಎಂಬ ಊರಿನಲ್ಲಿರುವ ಶಾಸನವಂತೂ ಕನ್ನಡಾಂಬೆಯ ಪುರಾತನ ಆಡಳಿತಕ್ಕೆ ಸಾಕ್ಷಿಯಾಗಿತ್ತು. ಆಕೆಯ ಆಳ್ವಿಕೆಯು ಪುರಾತನ ಕಾಲದಲ್ಲಿ ಗೋದಾವರಿಯಿಂದ ಕಾವೇರಿಯವರೆಗೆ ವಿಸ್ತಾರವಾಗಿತ್ತು.
ಜಗದಗಲದ ಸುನಾಮಿ
ಈ ವಿಚಾರವನ್ನು ಕನ್ನಡ ರಾಜಮಾತೆಯಲ್ಲದೆ, ಆತನ ಪ್ರಜೆಗಳು ಹೆಮ್ಮೆಯಿಂದ ತಮ್ಮ ಭಾಷಣಗಳಲ್ಲಿ, ಲೇಖನಗಳಲ್ಲಿ ಉದಾಹರಿಸ ತೊಡಗಿದ್ದರು. ಆ ರಾಜಮಾತೆಯ ಆಡಳಿತವಾಧಿಯಲ್ಲಿ ಕನ್ನಡದ ರಾಜಮಾತೆಯ ಆಡಳಿತವಾಧಿಯಲ್ಲಿ ಕನ್ನಡದ ವೈಭವದ ಪ್ರತೀಕವಾಗಿ ಹಲವಾರು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿತ್ತು. ಅಂತಿರ್ಪ ಕಾಲದೊಳ್ ಭಾರೀ ಭೂಕಂಪನವು ಆ ರಾಜ್ಯದಲ್ಲಿ ಸಂಭವಿಸಿತ್ತು. ರಿಯಾಕ್ಟರ್ ಮಾಪಕದಲ್ಲಿ 10.0... ಎಂದು ಪರಿಣಿತ ವಿಜ್ಞಾನಿಗಳು ಘೋಷಿಸಿದರು. ಸದ್ಯದಲ್ಲಿಯೇ ಇಮೋಜಿಯ ಸುನಾಮಿಗಳು ಬರಬಹುದೆಂದು ಸರಕಾರವನ್ನು ವಿಜ್ಞಾನಿಗಳು ಎಚ್ಚರಿಸಿದರು. ಅದು ಈವರೆಗೆ ಜಗತ್ತು ಕಂಡ ಸುನಾಮಿಗಳಲ್ಲಿಯೇ ಅತ್ಯಂತ ಭೀಕರವಾಗಿರಲಿದೆ ಎಂದು ಹಲವು ಭಾಷಾ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು. ಕೆಲ ದಿನಗಳಲ್ಲಿ ಕನರ್ಾಟಕ ಕಾನನಕ್ಕೆ ಇಮೋಜಿಯು ಸುನಾಮಿಯಾಗಿ ಬಂದಪ್ಪಳಿಸಿತು.
ಯುವವರ್ಗಗಳಿಗೆ ಯಮಪಾಶ
ಸಮತಟ್ಟಾಗಿ ಬಯಲು ಸೀಮೆಯಂತಿದ್ದ ಕನ್ನಡಮಾತೆಯ ರಾಜಧಾನಿಯನ್ನು ಆತ ಧ್ವಂಸ ಮಾಡಲಾರಂಭಿಸಿತು. ತರುವಾಯ ಕನ್ನಡನಾಡಿನ ಮೂಲೆಮೂಲೆಗಳಿಗೂ ಆತ ದಾಂಗುಡಿ ಇಟ್ಟ. ಆನ್ಲೈನ್ನಲ್ಲಿ ಆತ ವಿಜೃಂಭಿಸುವುದನ್ನು ಕನ್ನಡ ಮಾತೆಗೆ ತಡೆಯಲು ಅಸಾಧ್ಯವಾಯಿತು. ಆತ ತನ್ನ ಕಬಂಧ ಬಾಹುಗಳನ್ನು ಅಷ್ಟ ದಿಕ್ಕುಗಳಿಗೂ ಚಾಚಿದ್ದ. ಪ್ರಮುಖವಾಗಿ ಇಮೋಜಿಯು ಯುವವರ್ಗವನ್ನು ವಶೀಕರಿಸಿ, ಅವರ ಸಹಾಯ ಸಹಕಾರಗಳ ಮೂಲಕವೇ ತನ್ನ ಕ್ಷಿಪಣಿಗಳನ್ನು ಉಡಾಯಿಸತೊಡಗಿದ. ಇಮೋಜಿ ದಾಳಿಯು ಪರಮಾಣು ದಾಳಿಗಿಂತಲೂ ಭೀಕರತೆಯನ್ನು ಸೃಷ್ಟಿಸಿತು. ಯುವ ಸಮೂಹವು ಅತ್ಯಂತ ಸುಲಭವಾಗಿ ಆತನಿಗೆ ಬಲಿಯಾಗತೊಡಗಿತು. ಇಮೋಜಿಯು ಸಾಮಾಜಿಕ ಮಾಧ್ಯಮಗಳ ಮೂಲಕ ಯುವವರ್ಗವನ್ನು ತನ್ನ ಯಮಪಾಶದಿಂದ ಬಂಧಿಸಿದ. ಆನ್ಲೈನ್ನ ಸಾಮಾಜಿಕ ಜಾಲದ ನಂಟಿದ್ದ ವಯಸ್ಕರನ್ನು ಕನ್ನಡಾಂಬೆಯ ಅಪ್ಪಟ ಅಭಿಮಾನಿಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಂಡ. ಆತನ ಅಟ್ಟಹಾಸಕ್ಕೆ ಅಗ್ನಿಗೆ ಸಿಲುಕಿದ ತರಗೆಲೆಗಳಂತೆ ಕನ್ನಡಾಂಬೆಯ ಕಂದಮ್ಮಗಳು ಸಿಕ್ಕು ಭಸ್ಮವಾಗ ತೊಡಗಿದರು. ಜೊತೆಗೆ ಬೀಸುತ್ತಿದ್ದ ಬಿರುಗಾಳಿಯು ಅಗ್ನಿ ಶೀಘ್ರವಾಗಿ ಹರಡಲು ಪೂರಕವಾಗಿತ್ತು. ಆನ್ಲೈನ್ ಲೋಕದಲ್ಲಿ ಕನ್ನಡದ ಗೋಳನ್ನು ಕೇಳುವವರೇ ಇರಲಿಲ್ಲ. ಕನ್ನಡಮಾತೆಯ ಮುಗಿಲು ಗಿರಿಕಂದರ, ಗುಹೆಗಹ್ವರಗಳಲ್ಲಿಯೂ ಪ್ರತಿಧ್ವನಿಸುತ್ತಿತ್ತು. ಆದರೂ, ಆಕೆಯ ಆಕ್ರಂದನವನ್ನು ಕೇಳುವಾರರು ? ನೆರೆಯ ಮಲೆಯಾಳಂ ಮಾತೆ, ತಮಿಳು, ತೆಲುಗು, ಮರಾಠಿ ಮಾತೆಗಳಲ್ಲಿಯೂ ಇಮೋಜಿಯ ಸುನಾಮಿ ವಾತರ್ೆಗಳು ಕೇಳಿಬಂದವು. ಜೊತೆಗೆ ಹಿಂದಿಮಾತೆಯನ್ನು ಇಮೋಜಿ ತನ್ನ ಅಕ್ಟೋಪಸ್ ಬಾಹುಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದ ಸುದ್ದಿ ಮಿಂಚಿನ ವೇಗದಲ್ಲಿ ವಿಶ್ವದೆಲ್ಲೆಡೆ ಪಸರಿಸಲಾರಂಭಿಸಿತು. ಯಾರೂ ಕಲ್ಪನೆ ಮಾಡಲಾಗದ ಎಮೋಜಿ ಸುನಾಮಿಯಿಂದ ವಿಶ್ವವೇ ಗಡಗಡ ನಡುಗಲು ಆರಂಭವಾಯಿತು. ಅದು ರಕ್ತಾಬೀಜಾಸುರನಂತೆ ಎಕಕಾಲದಲ್ಲಿ ಜಗದಲಕ್ಕೂ ಪಸರಿಸಿತು. ಎಲ್ಲೆಡೆಯ ಇಮೋಜಿ ದಾಳಿಗೆ ಕಂಗಾಲಾಗದ ಭಾಷೆಗಳೇ ಇರಲಿಲ್ಲ !
ಕನ್ನಡದ ಕಂದಮ್ಮಗಳ ಬಲಿ
ಕನ್ನಡಾಂಬೆಗೆ ಇಮೋಜಿ ಸುನಾಮಿಯಿಂದ ತನ್ನ ಪ್ರಜೆಗಳನ್ನು ರಕ್ಷಿಸುವುದು ಹೇಗೆ ? ಎಂಬ ಚಿಂತೆ ಉಂಟಾಯಿತು. ಹಲವಾರು ಸಂಧಾನಗಳ ಪ್ರಯತ್ನಗಳು ವಿಫಲವಾದವು. ಕದನ ವಿರಾಮದ ದ್ಯೋತಕವಾಗಿ ಹಾರಿಸಲಾದ ಬಿಳಿಬಾವುಟವು ಸುನಾಮಿ ಬಿರುಗಾಳಿಗೆ ಹಾರಿ, ಶತ್ರು ರಾಷ್ಟ್ರದ ಗುಡ್ಡದ ಮೇಲೆ ಬಿದ್ದತು. ಇಮೋಜಿ ಸುನಾಮಿ ತಂದ ಬಿರುಮಳೆಗೆ ಆನ್ಲೈನ್ ಮೂಲಕ ಪ್ರಾಥಮಿಕ ಶಾಲೆಯ ಕಂದಮ್ಮಗಳು ಬಲಿಯಾದರು. ತನ್ನ ಕಂದಮ್ಮಗಳು ಇಮೋಜಿಗೆ ಬಲಿಪಶುವಾಗುವಾಗುತ್ತಿರುವುದನ್ನು ಕಂಡು ಕನ್ನಡಾಂಬೆ ಮಮ್ಮಲ ಮರುಗಿತು. ಮೌನವಾಗಿ ರೋಧಿಸಲಾರಂಭಿಸಿತು.
ಕಟ್ಟಕಡೆಯ ಪ್ರಯತ್ನವೆಂಬಂತೆ ಕನ್ನಡ ರಾಜನಾಭಿಮಾನಿಗಳೊಗೂಡಿ, ಕನ್ನಡ ಪರ ಸಂಘಟನೆಗಳ ಪ್ರಮುಖರೊಂದಿಗೆ ಹೋಗಿ, ಇಮೋಜಿಯಲ್ಲಿ ದೀನನಾಗಿ ಬೇಡಿದಳು ಕನ್ನಡಾಂಬೆ ! ಕನ್ನಡಾಂಬೆಯ ದೈನ್ಯಸ್ಥಿತಿಯನ್ನು ಕಂಡು ಕನ್ನಡಪರ ಸಂಘಟನೆಗಳ ಪ್ರಮುಖರ ಕಣ್ಣಂಚಿನಲ್ಲಿ ನೀರು ಮುಸುಲಧಾರೆಯಾಗಿ ಸುರಿಯಲಾರಂಭವಾಯಿತು. ಅವರಿಗೂ ಇದೀಗ ಪರಿಸ್ಥಿತಿಯ ಭೀಕರತೆಯ ಅರಿವಾಗತೊಡಗಿತು.
ನನಗೆ 2 ಸಾವಿರ ಇತಿಹಾಸವಿದೆ. ನನ್ನ ಪ್ರಜೆಗಳು ನನ್ನ ಆಳ್ವಿಕೆಯಲ್ಲಿ ಸುಖಿಗಳಾಗಿರುವರು. ಈಗಾಗಲೇ ಇಂಗ್ಲೀಷ್ ವ್ಯಾಮೋಹಕ್ಕೆ ಬಲಿಯಾದ ನಮ್ಮ ಪ್ರಜೆಗಳು ನನ್ನನ್ನು ಕಡೆಗಣಿಸುತ್ತಿರುವರು. ಇನ್ನೂ ನೀನು ಬಂದು ನಮ್ಮ ಕಂದಮ್ಮಗಳನ್ನು ಕಾಡಿದರೆ ಅವರ ಗತಿಯೇನು ? ದಯಮಾಡಿ ನನ್ನ ಅಚ್ಚುಮೆಚ್ಚಿನ ಯುವ ವರ್ಗವನ್ನು ಎಡ್ಸ್ನಂತೆ ಕಾಡಬೇಡ. ಅವರನ್ನು ಬಿಟ್ಟುಬಿಡು ಎಂದು ಅಂಗಲಾಚಿತು. ಕನ್ನಡ ಮಾತೆಯು ನೀರೊಳಿಗಿದರ್ು ಬೇರ್ಮದ ಉರಗ ಪತಾಕನಂತೆ ಮುಖದಲ್ಲಿ ಉರುಳುತ್ತಿರುವ ಬೆವರನ್ನು ಒರೆಸಿಕೊಂಡಿತು.
ಆದರೆ, ಎಮೋಜಿಯು ಕನ್ನಡಾಂಬೆಯ ಕೋರಿಕೆಯನ್ನು ಮನ್ನಿಸಲೇ ಇಲ್ಲ. ಕಲ್ಲು ಹೃದಯಿ, ದುಷ್ಟನಾದ ಆತ, ನಾನು ನಿನ್ನ ಪ್ರಜೆಗಳನ್ನು ಮಾತ್ರವಲ್ಲ, ನಿನ್ನನ್ನು ಸಂಪೂರ್ಣ ನಿನರ್ಾಮ ಮಾಡುವೆ. ನಾನು ವಿಶ್ವವ್ಯಾಪಿಯಾಗಿರುವ ಇಂಗ್ಲೀಷ್ ಮತ್ತು ಇತರ ಭಾಷಾ ಸಾಮ್ರಾಜ್ಯವನ್ನೇ ಹಾಳು ಮಾಡಲಾರಂಭಿಸಿರುವೆ. ಹಲವಾರು ನಾಡುಗಳನ್ನು ಧ್ವಂಸ ಮಾಡುತ್ತಿರುವ ನನಗೆ ಅಪಾರ ಅನುಭವವಿದೆ. ನನಗೆ ನಿನ್ನ ಪುಟ್ಟ ಸಾಮ್ರಾಜ್ಯವು ಲೆಕ್ಕಕ್ಕಿಲ್ಲ. ವಿಶ್ವದ ಆನ್ಲೈನ್ ಪ್ರಿಯರು, ಮೊಬೈಲ್ ಪ್ರಿಯರು, ಯುವವರ್ಗದವರು ನನ್ನನ್ನು ಒಪ್ಪಿ, ಅಪ್ಪಿಕೊಳ್ಳುತ್ತಿರುವರು ಎಂದು ಗರ್ವದಿಂದ ಬೀಗಿತು. ಇದನ್ನೆಲ್ಲಾ ಕೇಳಿದ ಕನ್ನಡ ಮಾತೆಗೆ ತನ್ನ ಉಳಿವು ಕಷ್ಟ ಸಾಧ್ಯ ಎಂಬಂತೆ ತೋರಿತು.
ಕನ್ನಡ ರಾಜನು ಕನ್ನಡ ರಾಜನ ಅಭಿಮಾನಿ ವರ್ಗವು ಬಂದ ದಾರಿಗೆ ಸುಂಕವಿಲ್ಲ. ಇಂತಹವರೊಡನೆ ಮಾತನಾಡದೇ ಇರುವುದೇ ಲೇಸೆಂದು ಬಗೆದು ಮುಖ ಒರೆಸಿಕೊಂಡು ವಾಪಾಸ್ಸಾಗಲು ಹೊರಟಿತು.
ಪ್ರಜೆಗಳು ಸುರಕ್ಷಿತರಲ್ಲ !
ಎಮೋಜಿಯು ಕನ್ನಡಾಂಬೆಯನ್ನು ಕುರಿತು ಕೂಗಿ ಹೇಳಿತು. ವಯಸ್ಕರಿರುವವರೆಗೆ ಮಾತ್ರ ನಿನ್ನ ದರ್ಪ-ಆಡಳಿತ. ಯುವವರ್ಗ ಮತ್ತು ಆನ್ಲೈನ್, ಮೊಬೈಲ್ ಪ್ರಿಯರನ್ನು ಎಲ್ಲಿಯವರೆಗೆ ನಿನ್ನ ಅಂಕೆಯಲ್ಲಿಡಲು ಅಸಾಧ್ಯವೋ ಅಲ್ಲಿಯವರೆಗೆ ನನ್ನ ಧಾಳಿಯಿಂದ ನೀನು, ನಿನ್ನ ಪ್ರಜೆಗಳು ಸುರಕ್ಷಿತರಲ್ಲ ಎಂದು ಎಚ್ಚರಿಸಿತು.
ಇಮೋಜಿಯು ತನ್ನ ಸುನಾಮಿಯಿಂದ ಕನ್ನಡ ರಾಜನನ್ನು ಆತನ ಪ್ರಜೆಗಳನ್ನು ಹಂತ ಹಂತವಾಗಿ ಅಪೋಶನ ಗೈಯುತ್ತಿರುವನು. ಆತನ ರಾಜ್ಯದಲ್ಲಿರುವ ವಯಸ್ಕ ಪ್ರಜೆಗಳು ಇದಕ್ಕೆ ಬಲಿಯಾಗುತ್ತಿರುವ ಯುವ ವರ್ಗವನ್ನು ಕಂಡು ಕೈಕಟ್ಟಿ ನೋಡುತ್ತಿದ್ದಾರೆ. ಭಾರತಾಂಬೆಯ ಪುಣ್ಯಭೂಮಿಯಲ್ಲಿ ಜನಿಸಿದ ಕನ್ನಡ ಮಾತೆಯ ಮಕ್ಕಳ ಸಂಕಟವನ್ನು ರಕ್ಷಿಸಿಸು ಎಂದು ಮೊರೆ ಇಡುತ್ತಿರುವರು.
ಕನ್ನಡವ ಕಾಪಾಡು ಓ ನನ್ನ ಕಂದ
ಕನ್ನಡ ಬಂಧುಗಳೇ ನೀವಾದರೂ, ಕನ್ನಡಾಂಬೆಯನ್ನು ರಕ್ಷಿಸಿಸಲು ಸಹಾಯ ಮಾಡಿ. ಇಮೋಜಿಯ ಬಳಕೆಯನ್ನು ಸಂಪೂರ್ಣ ನಿಲ್ಲಿಸಿ. ನಿಮ್ಮ ಸ್ನೇಹಿತರಿಗೂ, ಬಂಧುವರ್ಗಕ್ಕೂ ತಿಳಿಸಿ. ಇಲ್ಲವಾದಲ್ಲಿ ಕನ್ನಡಾಂಬೆಯ ರಾಜಾಡಳಿತವು ಪತನವಾದೀತು. ನಿಮ್ಮ ತಾಯಿಯ ಅಸ್ತಿತ್ವವೇ ನಾಶವಾದೀತು. ಮುಂದೆ ಕನ್ನಡ ಭಾಷೆಯನ್ನು ಶಿಲಾಫಲಕ, ಗೋಡೆ ಬರಹಗಳಲ್ಲಿ, ವಸ್ತುಸಂಗ್ರಹಾಲಯಗಳಲ್ಲಿ ನೋಡಬೇಕಾದೀತು. ಎಚ್ಚರ.....
3-12-2019
Subscribe to:
Post Comments (Atom)
ಹನಿ ನೀರೂ ಬಂಗಾರ...! Drop of water is Gold .......!
ಹನಿ ನೀರೂ ಬಂಗಾರ...! Pl watch my these blogs. Kodagu Darshini : http://koodanda.blogspot.com/ Kodagu Darshini (Kodagina Antaranga):...
-
ಕನ್ನಡದ ಕೊಲೆಗಾರ-ಇಮೋಜಿ... ಬರಹ: ಕೂಡಂಡ ರವಿ.ಹೊದ್ದೂರು. ಯುವವರ್ಗಗಳಿಗೆ ಯಮಪಾಶ ಸಮತಟ್ಟಾಗಿ ಬಯಲು ಸೀಮೆಯಂತಿದ್ದ ಕನ್ನಡಮಾತೆಯ ರಾಜಧಾನಿಯನ್ನು ಆತ ಧ್ವಂಸ ಮಾಡಲಾರಂ...
-
ಸ್ವದೇಶಿ ಹಲ್ಲು ಪುಡಿ-'ಉಮ್ಮಿ ಕರಿ' ಸಚಿತ್ರ ಬರಹ: ಕೂಡಂಡ ರವಿ ಗರಗರನೇ ಕಾಲಚಕ್ರ ಉರುಳಿದಂತೆ, ನಾವೂ ಅರಿತೋ ಅರಿಯದೆಯೋ ಅದರೊಡನೆ ಸಾಗುತ್ತ...
-
ಯೂರಿಯಾದ ಬದಲಿಯಾಗಿ “ ಆಡುಸೋಗೆ “ ಬಳಸಿ. Justicia adhatoda ಬರಹ : ಕೂಡಂಡ ರವಿ, ಹೊದ್ದೂರು, ಕೊಡಗು “ ಆ...
No comments:
Post a Comment